ಹೊಸ ಐಟಿ ಕಾಯ್ದೆ ಜಾರಿ
ನೂತನ ಮಾಹಿತಿ ತಂತ್ರಜ್ಞಾನ ಕಾಯಿದೆ ಇಂದಿನಿಂದ ಜಾರಿಗೆ ಬಂದಿದ್ದು, ಬಹುತೇಕ ಅಂತರ್ಜಾಲ ಮಧ್ಯಸ್ಥ ಕಂಪನಿಗಳು ನಿಯಮಗಳನ್ನು ಜಾರಿಗೊಳಿಸುವುದಾಗಿ ಹೇಳಿವೆ. ಮಾಹಿತಿ ತಂತ್ರಜ್ಞಾನ(ಮಧ್ಯಸ್ಥಗಾರರು ಹಾಗೂ ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ನಿಯಮಗಳು-2021 ಮಧ್ಯಸ್ಥ ಸಂಸ್ಥೆಗಳಾದ ಕೂ, ಫೇಸ್‍ಬುಕ್, ಗೂಗಲ್, ಟ್ವಿಟರ್, ಟೆಲಿಗ್ರಾಂ ಹಾಗೂ ಇನ್‍ಸ್ಟಾಗ್ರಾಂಗೆ ಅನ್ವಯಿಸಲಿದೆ. ಹೊಸ ನಿಯಮಗಳನ್ನು ತಾನು ಜಾರಿಗೊಳಿಸುವುದಾಗಿ ಫೇಸ್‍ಬುಕ್ ಹೇಳಿದ್ದು, ಬಹುತೇಕ ಎಲ್ಲ ನಿಯಮಗಳನ್ನು ತಾನು ಅಳವಡಿಸಿಕೊಂಡಿರುವುದಾಗಿ ಟೆಲಿಗ್ರಾಂ ಹೇಳಿಕೊಂಡಿದೆ. ದೇಶಿ ಆಪ್ ಕೂ, ತಾನು ಎಲ್ಲ ನಿಯಮಗಳಿಗೆ ಅಳವಡಿಸಿಕೊಂಡಿರುವುದಾಗಿ ಹೇಳಿದೆ. ಟ್ವಿಟರ್ ಹಾಗೂ […]
ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿ
ಸಂಚಿಕೆ ನಿರೀಕ್ಷಿಸಿ ಪ್ರೊ. ಮುಜಾಪ್ಫರ್ ಅಸ್ಸಾದಿ ಕರ್ನಾಟಕದಲ್ಲಿ ಸ್ತ್ರೀವಾದದ ಚಳವಳಿ ಹಾಗೂ ಕಥನಗಳ ಚಾರಿತ್ರಿಕ ಹಾಗೂ ಸಾಮಾಜಿಕ ಚಿತ್ರಣ ಸ್ತ್ರೀವಾದದ ನೆಲೆಗಳು , ಕರ್ನಾಟಕದಲ್ಲಿ ಸ್ತ್ರೀವಾದದ ಬೆಳವಣಿಗೆ; ಕಥನಗಳ ಇತಿಹಾಸ, ಉದಾರವಾದಿ ಸ್ತ್ರೀವಾದ, ಪರಿಸರ ಸ್ತ್ರೀವಾದ, ಗಾಂಧಿಯನ್ ಸ್ತ್ರೀವಾದ, ರೈತಾಪಿ ಮತ್ತು ಜನಪ್ರಿಯ ರೈತಾಪಿ ಸ್ತ್ರೀವಾದ, ಮುಸ್ಲಿಂ/ಇಸ್ಲಾಮಿಕ್ ಸ್ತ್ರೀವಾದ ದಲಿತ ಸ್ತ್ರೀವಾದ, ಆದಿವಾಸಿ/ಮೂಲನಿವಾಸಿ ಸ್ತ್ರೀವಾದ, ರೈತ ಚಳವಳಿಯಲ್ಲಿ ಮಹಿಳೆ, ಪರಿಸರ ಚಳವಳಿ ಮತ್ತು ಮಹಿಳಾ ವಿಷಯ, ಆದಿವಾಸಿ ಹೋರಾಟ ಮತ್ತು ಮಹಿಳೆ, ನಾಗರೀಕ ಸಮಾಜ ಹಾಗೂ ಮಹಿಳಾ […]
ಶಿಕ್ಷಣ ಮತ್ತು ಇಂಗ್ಲಿಷ್ ಕಲಿಕೆ
ಡಾ.ಹರೀಶ್ ಎಂ ಜಿ ಮೂವತ್ತು ವರುಷಗಳ ಹಿಂದೆ ಹೆಸರು ಜಾತಿ ಸೂಚಕವಾಗಿತ್ತು. ಒಬ್ಬ ವ್ಯಕ್ತಿಗಿಟ್ಟ ಬೀರ, ಕರಿಯ, ನಾಗ, ಕಾಳ, ಓಬಳ, ಕೆಂಚ, ಹೆಸರುಗಳೇ ಅವರ ಜಾತಿಯನ್ನ ಸೂಚಿಸಿಬಿಡುತ್ತಿತ್ತು. ವ್ಯಕ್ತಿ ಧರಿಸುತ್ತಿದ್ದ ಉಡುಗೆ ತೊಡುಗೆಗಳು ವರ್ಗಗಳ ಸೂಚಕವಾಗಿದ್ದವು. ಉದಾರೀಕರಣ, ಜಾಗತಿಕಾರಣ ಹಾಗು ನಗರೀಕರಣದ ಪ್ರಭಾವದಿಂದ ಈಗಿನ ಪೀಳಿಗೆಯ ಹುಡುಗ/ಹುಡುಗಿಯರಿಗೆ ಪೋಷಕರು ಈ ರೀತಿಯ ಹೆಸರುಗಳನ್ನ ಇಡುತ್ತಿಲ್ಲ. ಹಗಲು ರಾತ್ರಿ ಗೂಗಲ್ ಮಾಡಿ ಅತಿ ಯುನೀಕ್ ಆದ ಹೆಸರನ್ನೇ ಇಡುತ್ತಿದ್ದಾರೆ. ಇಂದು ನನಗೆ ಜಾತಿ ಮತ್ತು ವರ್ಗದ ಪ್ರಮುಖ […]
ದೆಹಲಿಯಲ್ಲಿ ಏಕಾಏಕಿ ಹವಾಮಾನ ಬದಲಾವಣೆ, ಧೂಳಿನ ಚಂಡಮಾರುತ
ನವದೆಹಲಿ, ಮಾರ್ಚ್ 30: ದೆಹಲಿಯಲ್ಲಿ ಏಕಾಏಕಿ ಹವಾಮಾನ ಬದಲಾವಣೆಗೊಂಡಿದ್ದು, ಧೂಳಿನ ಚಂಡಮಾರುತ ಆವರಿಸಿದೆ. ಇದು 48 ಗಂಟೆಗಳ ಕಾಲ ಇರಲಿದ್ದು, ಯಾರೂ ಕೂಡ ಸಾಧ್ಯವಾದಷ್ಟು ಮಟ್ಟಿಗೆ ಮನೆಯಿಂದ ಹೊರಹೋಗಬೇಡಿ ಎಂದು ಸೂಚನೆ ನೀಡಲಾಗಿದೆ. ಧೂಳಿನ ಕಣಗಳು ಶ್ವಾಸ ಕೋಶಕ್ಕೆ ಸೇರುವುದರಿಂದ ಹಲವು ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಧೂಳಿನ ಚಂಡಮಾರುತ ಆವರಿಸಿದ ತಕ್ಷಣ ಕತ್ತಲೆ ಆವರಿಸಿತ್ತು. ಗಾಳಿಯು ಪ್ರತಿ ಗಂಟೆಗೆ 40 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಏನೇ ಆಗಲಿ ಸುಡು ಬಿಸಿಲಿಂದ ಸ್ವಲ್ಪ ಹೊತ್ತು ಬಿಡುವು ದೊರೆತಂತಾಯಿತು. ಮುಂಬರುವ […]
ಸಿಇಟಿ, ನೀಟ್ ಜತೆಗೆ ಜೆಇಇ ವಿದ್ಯಾರ್ಥಿಗಳಿಗೂ ಆನ್‌ಲೈನ್ ಕೋಚಿಂಗ್ : ʼಗೆಟ್-ಸೆಟ್ ಗೋʼ ವ್ಯವಸ್ಥೆಗೆ CM ಯಡಿಯೂರಪ್ಪ ಚಾಲನೆ
ಬೆಂಗಳೂರು : ಕಳೆದ ವರ್ಷದಂತೆ ಈ ವರ್ಷವೂ ಸಿಇಟಿ, ನೀಟ್ ಜತೆಗೆ ಜೆಇಇ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ವಿಶೇಷ ಕೋಚಿಂಗ್ ನೀಡಲಾಗುವ ʼಗೆಟ್-ಸೆಟ್ ಗೋʼ ವ್ಯವಸ್ಥೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ವಿಧಾನಸೌಧದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ʼಗೆಟ್-ಸೆಟ್ ಗೋʼ (GetCETgo) ವ್ಯವಸ್ಥೆಗೆ ಚಾಲನೆ ಕೊಟ್ಟರಲ್ಲದೆ; ‘ಈವರೆಗೆ ಸಿಇಟಿ ಮತ್ತು ನೀಟ್‌ಗೆ ಮಾತ್ರ ತರಬೇತಿ ನೀಡಲಾಗುತ್ತಿತ್ತು. ಈ ವರ್ಷದಿಂದ ಹೆಚ್ಚುವರಿಯಾಗಿ ಜೆಇಇ ವಿದ್ಯಾರ್ಥಿಗಳಿಗೂ ಆನ್‌ಲೈನ್ ತರಬೇತಿ ಕೊಡಲಾಗುವುದು. ಈ ಸೌಲಭ್ಯವನ್ನು ಎಲ್ಲರೂ […]
ಗುಬ್ಬಚ್ಚಿ ಗೂಡು ಕಟ್ಟಲು ಬಿಡಬೇಕಿದೆ: ಇಂದು ವಿಶ್ವ ಗುಬ್ಬಚ್ಚಿ ದಿನ
ಮಂಡ್ಯ(ಮಾ.20): ಇಂದು ವಿಶ್ವ ಗುಬ್ಬಚ್ಚಿ ದಿನಾಚರಣೆ. ವಿನಾಶದ ಅಂಚಿನಲ್ಲಿರೋ ಗುಬ್ಬಚ್ಚಿಗಳ ಸಂರಕ್ಷಣೆಗಾಗಿ ವಿಶ್ವದಲ್ಲಿ ಮಾರ್ಚ್ 20ನ್ನು ವಿಶ್ವ ಗುಬ್ಬಚ್ಚಿ ದಿನ ಎಂದು ಆಚರಣೆ ಮಾಡಲಾಗ್ತಿದೆ. ಗುಬ್ಬಚ್ಚಿಗಳ ಸಂರಕ್ಷಣೆ ಮಾಡಲು ಕರೆ ನೀಡಿಲಾಗ್ತಿದೆ. ಆದ್ರೆ ಅದನ್ನು ಪಾಲಿಸುತ್ತಿರೋ ಸಂಖ್ಯೆಮಾತ್ರ ಕಡಿಮೆ. ಆದ್ರೆ ಇಲ್ಲೊಂದು ಕುಟುಂಬ ಮಾತ್ರ ಈ ಅಳಿವಿನಂಚಿನಲ್ಲಿರೋ ಗುಬ್ಬಚ್ಚಿಗಳ ಸಂರಕ್ಷಣೆಗಾಗಿ ಟೊಂಕ ಕಟ್ಟಿ ನಿಂತಿದೆ. ತಮ್ಮ ಮನೆಯಂಗಳದಲ್ಲಿ ನೂರಾರು ಗುಬ್ಬಚ್ಚಿಗಳನ್ನು ಸಾಕುವ ಮೂಲಕ ಸಂರಕ್ಷಣೆ ಮಾಡ್ತಾ, ವಿಶ್ವ ಗುಬ್ಬಚ್ಚಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸ್ತಿದೆ. ಹೌದು! ಇಂದು ವಿಶ್ಚ […]
ಮುಂದಿನ ಶೈಕ್ಷಣಿಕ ವರ್ಷ ಜುಲೈ 15ರಿಂದ ಆರಂಭ – ಶಿಕ್ಷಣ ಸಚಿವ ಸುರೇಶ್ ಕುಮಾರ್
ತುಮಕೂರು : ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಶುರುವಾಗಿದೆ. ಇದರಿಂದಾಗಿ ಶೈಕ್ಷಣಿಕ ಚಟುವಟಿಕೆಯ ಮೇಲೆ ಪರಿಣಾಮ ಬೀರಿದೆ. ಇದರ ನಡುವೆಯೂ ಜುಲೈ.15, 2021ರಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭಿಸುವ ಚಿಂತನೆ ನಡೆದಿದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ಸಿದ್ದಗಂಗಾ ಮಠಕ್ಕೆ ಇಂದು ಭೇಟಿ ನೀಡಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕೊರೋನಾ ಸೋಂಕಿನ ಭೀತಿಯ ನಡುವೆಯೂ ಮುಂದಿನ ಶೈಕ್ಷಣಿಕ ವರ್ಷ ಆರಂಭಿಸುವಂತ ತುರ್ತು ಪರಿಸ್ಥಿತಿ ಬಂದೊಂದಗಿದೆ. ಸದ್ಯಕ್ಕೆ […]
ಮಂಗಳೂರಿನಲ್ಲಿ ಎರಡು ಶಾಸನಗಳು ಪತ್ತೆ
ಮಂಗಳೂರು:ಮಂಗಳೂರಿನ ಹೊಯಿಜ್ ಬಜಾರ್‌ನಲ್ಲಿರುವ ಮೀನುಗಾರಿಕಾ ಕಾಲೇಜಿನ ತಂತ್ರಜ್ಞಾನ ವಿಭಾಗದ ಕ್ಯಾಂಪಸ್‌ನಲ್ಲಿ ಎರಡು ಶಾಸನಗಳು ದೊರೆತಿವೆ, ಶಾಸನಗಳಲ್ಲಿ ಒಂದು ಪೋರ್ಚುಗೀಸ್ ಮತ್ತು ಇನ್ನೊಂದು ಹಳೆಗನ್ನಡ (ಹಳೆಯ ಕನ್ನಡ) ದಲ್ಲಿದೆ. ಆಳವಾದ ಅಧ್ಯಯನವನ್ನು ನಡೆಸಲು ಮೈಸೂರಿನ ಶಾಸನ ತಜ್ಞರ ತಂಡವು ಶಾಸನದ ಎಸ್ಟಾಂಪೇಜ್ ಅನ್ನು ತೆಗೆದುಕೊಂಡಿದೆ. ಕನ್ನಡ ಶಾಸನವು 11 ಸಾಲುಗಳನ್ನು ಹೊಂದಿದೆ ಮತ್ತು 11 ನೇ ಶತಮಾನಕ್ಕೆ ಸೇರಿದೆ ಎಂದು ಪ್ರಾಥಮಿಕ ಅಧ್ಯಯನಗಳು ಬಹಿರಂಗಪಡಿಸಿವೆ. ಪೋರ್ಚುಗೀಸ್ ಭಾಷೆಯಲ್ಲಿನ ಶಾಸನದ ಬಗ್ಗೆ ಆಳವಾದ ಅಧ್ಯಯನವನ್ನು ನಡೆಸುವ ಅವಶ್ಯಕತೆಯಿದೆ ಎಂದು ತಜ್ಞರಾದ […]
ಹಳದಿ ರೋಗಕ್ಕೆ ಹಾಳಾದ ಅಡಿಕೆ ಬೆಳೆಗಾರರ ಬದುಕು
ಸುಳ್ಯ: ಕರಾವಳಿ ಕೃಷಿಕರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆ ಈಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರಲ್ಲೂ ಇದೀಗ ವ್ಯಾಪಕವಾಗಿರುವ ಹಳದಿ ಎಲೆ ರೋಗ ಅಡಿಕೆಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ. ದ.ಕ. ಜಿಲ್ಲೆಯಲ್ಲಿ ಸಾವಿರಾರೂ ಎಕರೆ ಅಡಿಕೆ ಕೃಷಿ ಹಳದಿ ಎಲೆ ರೋಗಕ್ಕೆ ತುತ್ತಾಗಿದೆ. ಜಿಲ್ಲೆಯ ಸುಳ್ಯ ತಾಲೂಕೊಂದರಲ್ಲೇ ಸಾವಿರಾರು ಎಕರೆ ಅಡಿಕೆ ಕೃಷಿ ಈ ರೋಗ ಬಾಧೆಯಿಂದ ತತ್ತರಿಸಿದೆ. ಇದರಿಂದ ಸಾವಿರಾರು ಕೃಷಿಕರು ಕಂಗಾಲಾಗಿದ್ದಾರೆ. 25-30 ವರ್ಷಗಳ ಹಿಂದೆ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ಕಾಣಿಸಿಕೊಂಡ ಈ ಹಳದಿ ಎಲೆ […]