ಬಮೂಲ್ ನಿಂದ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಧನ ಚೆಕ್ ವಿತರಣೆ

ದೊಡ್ಡಮಳೂರಿನ ಶ್ರೀರಾಮಮಂದಿರ ದೇವಸ್ಥಾನದ ಆವರಣದಲ್ಲಿ ಬಮೂಲ್ ನಿರ್ದೇಶಕರಾದ ಎಚ್.ಸಿ. ಜಯಮುತ್ತು ರವರ ನೇತೃತ್ವದಲ್ಲಿ ಚನ್ನಪಟ್ಟಣ ತಾಲ್ಲೂಕು ಹಾಲು ಉತ್ಪಾದಕರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಿಗೆ ಸನ್ಮಾನ ಹಾಗೂ ನಿವೃತ್ತಿ ಹೊಂದಿದ ಮುಖ್ಯ ಕಾರ್ಯನಿರ್ವಾಹಕರಿಗೆ ಸನ್ಮಾನ ಮತ್ತು ಅಕಾಲಿಕವಾಗಿ ಮರಣ ಹೊಂದಿದ ಸಿಬ್ಬಂದಿಯ ಕುಟುಂಬಗಳಿಗೆ ಪರಿಹಾರದ ಚೆಕ್ಕುಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಹಾಲು ಉತ್ಪಾದಕರ ನೌಕರರ  ಕ್ಷೇಮಭಿವೃದ್ಧಿ  ಸಂಘದ ಅಧ್ಯಕ್ಷರಾದ ಪುಟ್ಟೇಗೌಡ ರವರು. ಪದಾಧಿಕಾರಿಗಳಾದ ಪುಟ್ಟರಾಜು ಹೊಂಗನೂರು. ದೇವರಾಜು ತಗಚಗೆರೆ. ಕೆ.ಟಿ. ಲಕ್ಷ್ಮಮ್ಮ. ಬಿಳಿಗೌಡ. ಮಾಧು […]

ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿ

ಮುಂದಿನ ಸಂಚಿಕೆ ನಿರೀಕ್ಷಿಸಿ ಪ್ರೊ. ಮುಜಾಪ್ಫರ್ ಅಸ್ಸಾದಿ ಕರ್ನಾಟಕದಲ್ಲಿ ಸ್ತ್ರೀವಾದದ ಚಳವಳಿ ಹಾಗೂ ಕಥನಗಳ ಚಾರಿತ್ರಿಕ ಹಾಗೂ ಸಾಮಾಜಿಕ ಚಿತ್ರಣ ಸ್ತ್ರೀವಾದದ ನೆಲೆಗಳು , ಕರ್ನಾಟಕದಲ್ಲಿ ಸ್ತ್ರೀವಾದದ ಬೆಳವಣಿಗೆ; ಕಥನಗಳ ಇತಿಹಾಸ, ಉದಾರವಾದಿ ಸ್ತ್ರೀವಾದ, ಪರಿಸರ ಸ್ತ್ರೀವಾದ, ಗಾಂಧಿಯನ್ ಸ್ತ್ರೀವಾದ, ರೈತಾಪಿ ಮತ್ತು ಜನಪ್ರಿಯ ರೈತಾಪಿ ಸ್ತ್ರೀವಾದ, ಮುಸ್ಲಿಂ/ಇಸ್ಲಾಮಿಕ್ ಸ್ತ್ರೀವಾದ ದಲಿತ ಸ್ತ್ರೀವಾದ, ಆದಿವಾಸಿ/ಮೂಲನಿವಾಸಿ ಸ್ತ್ರೀವಾದ, ರೈತ ಚಳವಳಿಯಲ್ಲಿ ಮಹಿಳೆ, ಪರಿಸರ ಚಳವಳಿ ಮತ್ತು ಮಹಿಳಾ ವಿಷಯ, ಆದಿವಾಸಿ ಹೋರಾಟ ಮತ್ತು ಮಹಿಳೆ, ನಾಗರೀಕ ಸಮಾಜ ಹಾಗೂ […]

ಏರುಗತಿಯಲ್ಲಿದ್ದ ಕೋವಿಡ್‌ ಪ್ರಕರಣಗಳಲ್ಲಿ ಅಲ್ಪ ಇಳಿಕೆ

ದೆಹಲಿ: ಕಳೆದ ಕೆಲ ದಿನಗಳಿಂದ ದೇಶದಲ್ಲಿ ಸತತ ಏರಿಕೆ ಕಾಣುತ್ತಿದ್ದ ಕೋವಿಡ್‌ ಪ್ರಕರಣಗಳು ಇಂದು ಅಲ್ಪ ಪ್ರಮಾಣದಲ್ಲಿ ಕುಸಿದಿವೆ. ಶುಕ್ರವಾರ 16,577 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಶನಿವಾರ ಬೆಳಗ್ಗೆ 16,488 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಏರುಗತಿಯಲ್ಲಿದ್ದ ಕೋವಿಡ್‌ ಕೊಂಚ ಇಳಿದಂತಾಗಿದೆ. ಇನ್ನು, ‘ಈ 24 ಗಂಟೆಗಳ ಅವಧಿಯಲ್ಲಿ 113 ಮಂದಿ ಕೋವಿಡ್‌ಗೆ ಪ್ರಾಣ ತೆತ್ತಿದ್ದಾರೆ. 12,771 ಮಂದಿ ಗುಣಮುಖರಾಗಿದ್ದಾರೆ,’ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಒದಗಿಸಿದೆ. ದೇಶದಲ್ಲಿ ಒಟ್ಟಾರೆ 1,10,79,979 ಕೋವಿಡ್‌ ಪ್ರಕರಣಗಳು ದೃಢವಾಗಿವೆ. 1,07,63,451 ಮಂದಿ […]

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ ಪ್ರಕಟ

ಶ್ರೀ ನಾಗೇಶ ಹೆಗ್ಡೆ                      ಡಾ.ಸಿ.ಆರ್.ಚಂದ್ರಶೇಖರ್ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಕೊಡಮಾಡುವ  ವಿಜ್ಞಾನ ಸಂವಹನೆ-ಜೀವಮಾನ ಸಾಧನೆಗಾಗಿ ಈ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿರುವ ಖ್ಯಾತ ಮನೋವೈದ್ಯರು, ಲೇಖಕರಾದ ಡಾ.ಸಿ.ಆರ್.ಚಂದ್ರಶೇಖರ್(2021ನೇ ಸಾಲು) ಹಾಗೂ ಖ್ಯಾತ ವಿಜ್ಞಾನ ಲೇಖಕರು ಹಾಗೂ ಪರಿಸರ ತಜ್ಞರಾದ ಶ್ರೀ ನಾಗೇಶ ಹೆಗ್ಡೆ(2020 ನೇ ಸಾಲು) ಅವರು ಆಯ್ಕೆಯಾಗಿರುತ್ತಾರೆ. ಪ್ರಶಸ್ತಿ ಒಂದು ಲಕ್ಷ ರೂ ನಗದು […]

‘ನಮ್ಮ ಕಾರ್ಗೋ’ ಸೇವೆ ಹಾಗೂ ರಕ್ತದಾನದ ಬಸ್‌ಗೆ ಸಿಎಂ ಚಾಲನೆ

ಬೆಂಗಳೂರು,ಫೆ.26- ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೂತನ ಪಾರ್ಸಲ್ ಕಾರ್ಗೊ ಸೇವೆ ಮತ್ತು ಕೆಎಸ್‍ಆರ್‍ಟಿಸಿ, ಕಿದ್ವಾಯಿ, ರೋಟರಿ ಸಹಯೋಗದೊಂದಿಗೆ ನಿರ್ಮಿಸಿರುವ ಮೊಬೈಲ್ ರಕ್ತದಾನದ ಬಸ್‍ನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು. ವಿಧಾನಸೌಧ ಮುಂಭಾಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾರ್ಗೊ ಸೇವೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಕೋವಿಡ್‍ನಿಂದಾಗಿ ಸಾರಿಗೆ ಸಂಸ್ಥೆಗಳು ತೀವ್ರ ಸಂಕಷ್ಟದಲ್ಲಿದ್ದು, ಪರ್ಯಾಯ ಮಾರ್ಗದ ಆದಾಯವನ್ನು ಕಂಡುಕೊಂಡಿರುವುದು ಸಮಯೋಚಿತವಾಗಿದೆ ಎಂದು ಹೇಳಿದರು. ರಾಜ್ಯದ ಕೆಎಸ್‍ಆರ್‍ಟಿಸಿ ವಾಯುವ್ಯ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗಳು ಪ್ರತಿದಿನ 51 ಲಕ್ಷ ಕಿ.ಮೀ […]

CBSE ವಿದ್ಯಾರ್ಥಿಗಳ ಗಮನಕ್ಕೆ : 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಕ್ರಮ ಕಡಿತ ಮಾಡಿಲ್ಲ : ಸ್ಪಷ್ಟನೆ ನೀಡಿದ ಮಂಡಳಿ

ನವದೆಹಲಿ : ವದಂತಿಗಳನ್ನು ತಳ್ಳಿ ಹಾಕಿರುವ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ ಇ) ಮುಂಬರುವ 10ನೇ ತರಗತಿ ಯ ಬೋರ್ಡ್ ಪರೀಕ್ಷೆಗಳಿಗೆ ಸಮಾಜ ವಿಜ್ಞಾನದ ಸಿಲೆಬಸ್ ಕಡಿಮೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಎರಡು ದಿನಗಳ ಹಿಂದೆ ವಿವಿಧ ವೆಬ್ ಪೋರ್ಟಲ್ ಗಳು ಸಾಮಾಜಿಕ ವಿಜ್ಞಾನ ವಿಷಯಗಳ ಥಿಯರಿಯಲಿ ಒಟ್ಟು ಐದು ಘಟಕಗಳನ್ನು ತೆಗೆದುಹಾಕಲಾಗಿದೆ ಎಂದು ವರದಿ ಮಾಡಿದ್ದವು. ಆದರೆ, ಈ ಬಗ್ಗೆ ಸದ್ಯಕ್ಕೆ ಯಾವುದೇ ಘೋಷಣೆ ಮಾಡಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ’10ನೇ ತರಗತಿಯ ಸಮಾಜ […]

ಕೋವಿಡ್ ಗಂಡಸರಿಗೆ ಹೆಚ್ಚು ಮಾರಕವೇಕೆ?

ಕೊಳ್ಳೇಗಾಲ ಶರ್ಮ ಬಹುಶಃ ಬೇರೆಲ್ಲಾ ವಿಷಯದಲ್ಲಿಯೂ ಮಹಿಳೆಯರನ್ನು ಅಬಲರೆನ್ನಬಹುದು. ಅದರೆ ಕೋವಿಡ್‌ ವಿಷಯದಲ್ಲಿ ಬಂದಾಗ ಮಹಿಳೆಯರೇ ಸಬಲರು. ಆ ಸೋಂಕಿನಿಂದ ಗೆದ್ದು ಬರುವವರಲ್ಲಿ ಅವರೇ ಹೆಚ್ಚಂತೆ. ಇದು ಅವರಿಗೆ ನಿಸರ್ಗ ಇತ್ತ ವರವಿಬಹುದು. ಏಕೆಂದರೆ ಗಂಡಸರು ಹಾಗೂ ಹೆಂಗಸರ ರೋಗಪ್ರತಿರೋಧಕತೆಯಲ್ಲಿ ನಿರ್ಣಾಯಕವಾದ ವ್ಯತ್ಯಾಸಗಳಿವೆ ಎಂಬ ಸುದ್ದಿಯನ್ನು ಮೊನ್ನೆ ಸೈನ್ಸ್‌ ಪತ್ರಿಕೆ ವರದಿ ಮಾಡಿದೆ. ರೋಗಪ್ರತಿರೋಧಕತೆಯಲ್ಲಿ ಹೀಗೊಂದು ಲಿಂಗಭೇದ ಸ್ಪಷ್ಟವಾಗಿದೆ ಎಂದು ಅಮೆರಿಕೆಯ ಯೇಲ್‌ ವಿಶ್ವವಿದ್ಯಾನಿಲಯದ ವೈದ್ಯ ವಿಜ್ಞಾನಿಗಳಾದ ಅಕಿಕೋ ಇವಸಾಕಿ ಮತ್ತು ತಕೆಹಿರೊ ತಕಹಾಶಿ ವರದಿ ಮಾಡಿದ್ದಾರೆ. […]

8.51 ಲಕ್ಷ ವಿದ್ಯಾರ್ಥಿಗಳು ಎಸ್‌ಎಸ್‌ಎಲ್ ಸಿ ಪರೀಕ್ಷೆ ಬರೆಯಲಿದ್ದಾರೆ: ಸುರೇಶ್ ಕುಮಾರ್

ಬೆಂಗಳೂರು: ರಾಜ್ಯದಲ್ಲಿ ಈ ವರ್ಷ 8.51 ಲಕ್ಷ ವಿದ್ಯಾರ್ಥಿಗಳು ಎಸ್‌ಎಸ್‌ಎಲ್ ಸಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು. ನಗರದ ಸಮಗ್ರ ಶಿಕ್ಷಣ ಕಚೇರಿಯಲ್ಲಿ 2020ರ ಎಸ್‌ಎಸ್‌ಎಲ್ ಸಿ ಪರೀಕ್ಷೆಯ ಯಶೋಗಾಥೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಕೋವಿಡ್-19 ನಡುವೆಯೇ ದೇಶಕ್ಕೆ ಮಾದರಿಯಾಗುವಂತೆ ಪರೀಕ್ಷೆ ನಡೆಸಿದ್ದೇವೆ. ಈ ವರ್ಷದ ಪರೀಕ್ಷೆ ಇನ್ನು ಉತ್ಕೃಷ್ಟ ರೀತಿಯಲ್ಲಿ ನಡೆಸುವ ಸವಾಲು ನಮ್ಮ ಮುಂದಿದೆ ಎಂದರು. 2021ರ ಎಸ್‌ಎಸ್‌ಎಲ್ ಸಿ […]

ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಪ್ರಕರಣ : ಓರ್ವ ಆರೋಪಿಯ ಬಂಧನ

ಚಿಕ್ಕಬಳ್ಳಾಪುರ: ರಾಜ್ಯವನ್ನು ಮತ್ತೆ ಬೆಚ್ಚಿ ಬೀಳಿಸಿದ ಚಿಕ್ಕಬಳ್ಳಾಪುರ ಹೀರೆನಾಗವೇಲಿ ಸಮೀಪದ ಕಲ್ಲುಕ್ವಾರಿ ಬಳಿ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ವಸ್ತುಗಳನ್ನು ಸಾಗಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಗೌರಿಬಿದನೂರು ಮೂಲದ ಗಂಗೋಜಿ ರಾವ್ ಬಂಧಿತ ಆರೋಪಿ. ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಸ್ಫೋಟಕಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ದೂರು ದಾಖಲಾಗಿತ್ತು. ಸದ್ಯ, ಸ್ಫೋಟಕ ವಸ್ತುಗಳನ್ನು ಸಾಗಿಸಿದ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಾಗೇಪಲ್ಲಿ ಮೂಲದ ನಾಗರಾಜ್ ರೆಡ್ಡಿ, ಆಂಧ್ರಪ್ರದೇಶದ ರಾಘವೇಂದ್ರ ರೆಡ್ಡಿ ಹಾಗೂ ಶಿವರೆಡ್ಡಿ ಬ್ರಹ್ಮವರ್ಷಿಣಿ ಕ್ರಶರ್​ ಮಾಲೀಕರೆಂದು ತಿಳಿದುಬಂದಿದೆ

Back To Top