ಕಾರಣವಿಲ್ಲದ ಭಯ ಭೀತಿಗಳು
ಆಂಟನ್ ಚೆಕಾವ್ ಅನು: ನಾಗರೇಖಾ ಗಾಂವಕರ ಈ ಜಗದಲ್ಲಿ ಇಷ್ಟು ವರ್ಷಗಳ ಬದುಕಿನುದ್ದಕ್ಕೂ ನಾನು ಬರಿಯ ಮೂರು ಬಾರಿ ಮಾತ್ರ ಭಯಗೊಂಡಿದ್ದೆ. ಮೊದಮೊದಲ ಭಯ ಹೇಗಿತ್ತೆಂದರೆ ಅದು ನನ್ನ ರೋಮಗಳು ನೆಟ್ಟಗಾಗುವಂತೆ ಮಾಡಿತ್ತು. ಇಡೀ ದೇಹವನ್ನು ಥರಥರ ಕಂಪಿಸುವಂತೆ ಮಾಡಿತ್ತು. ಅದು ತೀರಾ ಕ್ಷುಲಕವಾದ ಭಯ. ಆದರೆ ಒಂದು ಬಗೆಯಲ್ಲಿ ವಿಚಿತ್ರವಾಗಿತ್ತು. ಜುಲೈ ತಿಂಗಳ ಒಂದು ಸಂಜೆ ಮಾಡಲು ಏನೂ ಕೆಲಸವಿಲ್ಲದ್ದರಿಂದ ಪತ್ರಿಕೆ ತರೋಣವೆಂದು ನಾನು ನಿಲ್ದಾಣಕ್ಕೆ ಗಾಡಿ ಚಲಾಯಿಸಿದೆ. ಜುಲೈ ತಿಂಗಳ ಒಂದೇ ನಮೂನೆಯ ಸಂಜೆಗಳಂತೆ […]