ಭೂಸ್ವಾಧೀನ ವಿರುದ್ಧದ ಹೋರಾಟಕ್ಕೆ ಸಾವಿರ ದಿನ
ರೈತ ಮುಖಂಡ ಜಗಜೀತ್ ಸಿಂಗ್ ದಲ್ಲೇವಾಲ್ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿ ಸೇರಿದಂತೆ ನಾನಾ ಕಾಯಿದೆಗಳ ಜಾರಿಗೆ ಆಗ್ರಹಿಸಿ ನವೆಂಬರ್ 26, 2024 ರಿಂದ ನಿರಶನ ನಡೆಸುತ್ತಿದ್ದಾರೆ. ಅವರನ್ನು ಸುಪ್ರೀಂ ಕೋರ್ಟ್ ನೇಮಿಸಿದ ಉನ್ನತಾಧಿಕಾರ ಸಮಿತಿ ಭೇಟಿ ಮಾಡಿ, ವೈದ್ಯಕೀಯ ನೆರವು ಪಡೆಯಲು ಕೋರಿದೆ. ಆದರೆ, ಅವರು ನಿರಾಕರಿಸಿದ್ದು, ಅವರ ಆರೋಗ್ಯ ಹದಗೆಡುತ್ತಿದೆ. ಇದೇ ಹೊತ್ತಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾ ಭಿವೃದ್ಧಿ ಮಂಡಳಿ(ಕೆಐಎಡಿಬಿ)ಗೆ ಭೂಮಿ ಕೊಡುವುದಿಲ್ಲ ಎಂದು ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ರೈತರು ನಡೆಸುತ್ತಿರುವ […]
ಪೆರಿಯಾರ್, ವೈಕಂ ಚಳವಳಿ ಮತ್ತು ದೇವನೂರು ಮಹಾದೇವ
ಸುಮಾರು 100 ವರ್ಷಗಳ ಹಿಂದೆ ನಡೆದ ಸಾಟಿಯಿಲ್ಲದ ಸಾಮಾಜಿಕೋ-ರಾಜಕೀಯ ಹೋರಾಟ; ವೈಕಂ ಚಳವಳಿ. ಅದು ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ವಿರುದ್ಧ ನಡೆದ ದೇಶದ ಮೊಟ್ಟಮೊದಲ ಹೋರಾಟ; ದೇಶದ ಸಾಮಾಜಿಕ ಸುಧಾರಣೆ ಪಥವನ್ನು ರೂಪಿಸಿತು. ಇನ್ನೇನು ಚದುರಿ ಹೋಗಲಿದ್ದ ಈ ಚಳವಳಿಗೆ ಹುರುಪು ತುಂಬಿ, ದಿಗ್ದರ್ಶನ ಮಾಡಿದವರು ಪೆರಿಯಾರ್ ಇ.ವಿ. ರಾಮಸ್ವಾಮಿ. ಆನಂತರ ಅವರು ಆರಂಭಿಸಿದ ದ್ರಾವಿಡ ಚಳವಳಿ ಹಾಗೂ ಸ್ವಾಭಿಮಾನ ಚಳವಳಿಗಳು ದಕ್ಷಿಣ ಭಾರತದ ರಾಜಕೀಯ ಚಿತ್ರಣವನ್ನೇ ಬದಲಿಸಿದವು. ಅವರ ನೆನಪಿನಲ್ಲಿ ತಮಿಳುನಾಡು ಸರ್ಕಾರ ಆರಂಭಿಸಿದ […]
ನಮ್ಮ ಆಯ್ಕೆಗಳ ಮೂಲಕ ಸಂವಿಧಾನವನ್ನು, ಅದರ ಮುಂಗಾಣ್ಕೆಯನ್ನು ಹಾಳುಗೆಡವಿದ್ದೇವೆ
Indians today are governed by 2 different ideologies. Their political ideal set in the preamble of the Constitution affirms a life of liberty, equality and fraternity. Their social ideal, embodied in their religion denies them……I like the religion that teaches liberty, equality anf fraternity. -B. R. Ambedkar ನವೆಂಬರ್ 26ಕ್ಕೆ ಸಂವಿಧಾನ ತನ್ನ 75 ವರ್ಷಗಳನ್ನು ಪೂರೈಸಿದೆ. ಅಮೃತ […]
ʻಒಂದು ದೇಶ ಒಂದು ಚುನಾವಣೆʼ ರಾಜಕೀಯ ಉತ್ತರದಾಯಿತ್ವಕ್ಕೆ ಹಿನ್ನಡೆ
ʻಒಂದು ದೇಶ ಒಂದು ಚುನಾವಣೆ(ಒಂದೇ ಒಂಚು)ʼ ಕಾರ್ಯನೀತಿಯ ಅನುಷ್ಠಾನಕ್ಕೆ ಮೂರು ಕಾಯಿದೆಗಳ ತಿದ್ದುಪಡಿಗೆ ಒಕ್ಕೂಟ ಸರ್ಕಾರ ಮುಂದಾಗಿದೆ. ಮಸೂದೆಗೆ ಕನಿಷ್ಠ ಅರ್ಧದಷ್ಟು ರಾಜ್ಯಗಳ ಅನುಮತಿ ಅಗತ್ಯವಿದೆ. ಇದು 1983 ರಿಂದ ಚರ್ಚೆಯಲ್ಲಿರುವ ಪರಿಕಲ್ಪನೆ. ಆಗ ಕಾನೂನು ಆಯೋಗ ತನ್ನ ವರದಿಯಲ್ಲಿ ʼಏಕಕಾಲದಲ್ಲಿ ಚುನಾವಣೆಯಿಂದ ವೆಚ್ಚ ಇಳಿಕೆ ಆಗಲಿದೆ. ಚುನಾವಣೆಗೆ ಸರ್ಕಾರಿ ನೌಕರರ ನಿಯೋಜನೆ ಕಡಿಮೆಯಾಗುವುದರಿಂದ, ಉತ್ಪಾದಕತೆ ಹೆಚ್ಚಲಿದೆ. ರಾಜಕೀಯ ಪಕ್ಷಗಳು ಆಡಳಿತದತ್ತ ಗಮನ ನೀಡಲು ಸಾಧ್ಯವಾಗುತ್ತದೆʼ ಎಂದು ಹೇಳಿತ್ತು. ಆನಂತರ 1999ರಲ್ಲಿ ಕಾನೂನು ಆಯೋಗ ತನ್ನ 177ನೇ […]
ಭೂಮಿ ಮೇಲಿನ ಯಾವುದೇ ಪ್ರಚಾರದಿಂದ ಪ್ಯಾಲೆಸ್ತೀನ್ನ ಗಾಯವನ್ನು ಮರೆಮಾಡಲು ಸಾಧ್ಯವಿಲ್ಲ: ಅರುಂಧತಿ ರಾಯ್
ಲೇಖಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ಅರುಂಧತಿ ರಾಯ್ ಅವರಿಗೆ 2024 ರ PEN ಪಿಂಟರ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ನಾಟಕಕಾರ ಹೆರಾಲ್ಡ್ ಪಿಂಟರ್ ಅವರ ನೆನಪಿನಲ್ಲಿ ನೀಡುವ ವಾರ್ಷಿಕ ಪ್ರಶಸ್ತಿ ಇದಾಗಿದ್ದು, ಬಹುಮಾನದ ಮೊತ್ತವನ್ನು ಪ್ಯಾಲೇಸ್ಟಿನಿನ ಮಕ್ಕಳ ಪರಿಹಾರ ನಿಧಿಗೆ ನೀಡುವುದಾಗಿ ರಾಯ್ ಹೇಳಿದ್ದಾರೆ. ಬ್ರಿಟಿಷ್-ಈಜಿಪ್ಟಿಯನ್ ಬರಹಗಾರ ಮತ್ತು ಕಾರ್ಯಕರ್ತ ಅಲಾ ಅಬ್ದ್ ಎಲ್-ಫತಾ ಅವರೊಂದಿಗೆ ಪ್ರಶಸ್ತಿಯನ್ನು ಹಂಚಿಕೊಳ್ಳು ವುದಾಗಿ ಹೇಳಿದ ರಾಯ್, ಅಕ್ಟೋಬರ್ 10, 2024 ರ ಸಂಜೆ ಬ್ರಿಟಿಷ್ ಲೈಬ್ರರಿಯಲ್ಲಿ ಮಾಡಿದ ಸ್ವೀಕಾರ ಭಾಷಣದ […]
ಇಲ್ಲಿ ಸಾವಿರಾರು ಅನ್ನಾ ಪೆರಾಯಿಲ್ ಹಾಗೂ ತರುಣ್ ಸಕ್ಸೇನಾಗಳು
ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಮತ್ತು ತರುಣ್ ಸಕ್ಸೇನಾ ಅವರ ಸಾವು ಅನ್ಯಾಯ ಮಾತ್ರವಲ್ಲ; ಇಂಥ ಸಾವಿಗೆ ಕಾರಣರಾದವರಿಗೆ ಕ್ಷಮೆ ಇರಬಾರದು. ಆದರೆ, ದೇಶದಲ್ಲಿ ವರ್ಷಕ್ಕೆ 2 ಲಕ್ಷ ಇಂಥ ಸಾವು ಸಂಭವಿಸುತ್ತದೆ. ಇವರ ಸಾವಿಗೆ ಕಾರಣರಾದವರಿಗೆ ಏನು ಶಿಕ್ಷೆ ಆಗಿದೆ? ಅನ್ನಾ ಸಾವಿನ ಬಳಿಕ ಜಗತ್ತಿನೆಲ್ಲೆಡೆಯ ದಪ್ಪ ಗಾಜು, ಮೃದು ಸೋಫಾ-ಕುರ್ಚಿಗಳ ಕಚೇರಿಗಳು ಸ್ವಲ್ಪ ಕಂಪಿಸಿದವು. ಅಷ್ಟೆ. ಆನಂತರ ʻವ್ಯವಹಾರ ಎಂದಿನಂತೆʼ ಸ್ಥಿತಿ ಮುಂದುವರಿಯಿತು. ಅನ್ನಾ(26), 120ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ಜಾಗತಿಕ ಕಂಪನಿ ಅರ್ನ್ಸ್ಟ್ […]
ಲ್ಯಾಟರಲ್ ಎಂಟ್ರಿಯೂ, ಐಎಎಸ್ ವ್ಯವಸ್ಥೆಯೂ………..
ಕ್ರೋನಾಲಜಿ ಇಂತಿದೆ: ಆಗಸ್ಟ್ 17ರಂದು ಕೇಂದ್ರ ನಾಗರಿಕ ಸೇವೆಗಳ ಆಯೋಗ(ಯುಪಿಎಸ್ಸಿ) ವಿವಿಧ ಮಂತ್ರಾಲಯಗಳ 45 ಜಂಟಿ ಕಾರ್ಯದರ್ಶಿ, ನಿರ್ದೇಶಕ ಹಾಗೂ ಉಪ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ, ಜಾಹೀರಾತು ಪ್ರಕಟಿಸಿತು. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ʻಇದು ರಾಷ್ಟ್ರವಿರೋಧಿ ಹೆಜ್ಜೆಯಾಗಿದ್ದು, ಸರ್ಕಾರಿ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ-ವರ್ಗ ಹಾಗೂ ಒಬಿಸಿಗಳ ಮೀಸಲು ಕಿತ್ತುಕೊಳ್ಳುವ ಪ್ರಯತ್ನʼ ಎಂದು ಟೀಕಿಸಿದರು. ಎನ್ಡಿಎ 3.0ಯ ಮೈತ್ರಿ ಪಕ್ಷಗಳಾದ ಲೋಕ ಜನಶಕ್ತಿ ಪಾರ್ಟಿಯ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಮತ್ತು ಜೆಡಿಯು ಕೂಡ ಪ್ರಸ್ತಾವವನ್ನು […]
ಯುರೋಪಿನಲ್ಲಿ ಬಲಪಂಥೀಯರ ಪ್ರಾಬಲ್ಯ ಹೆಚ್ಚಳ
ಯುರೋ 2024 ಫುಟ್ಬಾಲ್ ಟೂರ್ನಿ ಆರಂಭಕ್ಕೆ ಮುನ್ನ ಫ್ರಾನ್ಸ್ ತಂಡದ ನಾಯಕ ಕೈಲಿಯನ್ ಎಂಬಾಪ್ಪೆ ಪತ್ರಿಕಾಗೋಷ್ಟಿಯಲ್ಲಿ, ʻತೀವ್ರವಾದಿಗಳು ಅಧಿಕಾರದ ಹೊಸ್ತಿಲಲ್ಲಿ ಇದ್ದಾರೆ. ನನ್ನ ಮೌಲ್ಯ ಅಥವಾ ನಮ್ಮ ಮೌಲ್ಯ ಗಳಿಗೆ ಹೊಂದಿಕೆಯಾಗದ ದೇಶವನ್ನು ಪ್ರತಿನಿಧಿಸಲು ನಾನು ಇಚ್ಛಿಸುವುದಿಲ್ಲ,ʼ ಎಂದು ಹೇಳಿದ್ದರು. ಇನ್ನೊಂದು ಹೆಜ್ಜೆ ಮುಂದೆ ಹೋದ ಜೊತೆ ಆಟಗಾರ ಮಾರ್ಕಸ್ ತುರಂ, ʻಫ್ರೆಂಚರು ಲಿ ಪೆನ್ ಅವರ ನ್ಯಾಷನಲ್ ರ್ಯಾಲಿ(ಎನ್ಆರ್)ಪಕ್ಷ ಬಲಗೊಳ್ಳದಂತೆ ನೋಡಿಕೊಳ್ಳಬೇಕು,ʼ ಎಂದು ಒತ್ತಾಯಿಸಿದ್ದರು. ನಮ್ಮಲ್ಲಿ ಒಬ್ಬನೇ ಒಬ್ಬ ಕ್ರೀಡಾಪಟು ಇಂಥ ಹೇಳಿಕೆ ನೀಡಿದ್ದನ್ನು, ಸರ್ವಾಧಿಕಾರಿ […]
ಬಲಪಂಥೀಯತೆ: ಒಂದು ಜಾಗತಿಕ ಪಿಡುಗು
ಇಂಡಿಯ ಸೇರಿದಂತೆ ಪ್ರಜಾಪ್ರಭುತ್ವವಿರುವ ದೇಶಗಳಿಗೆ ೨೦೨೪ ಸಂಕಷ್ಟದ ವರ್ಷವಾಗಲಿದೆಯೇ? ಜಗತ್ತಿನ ದೊಡ್ಡ ಪ್ರಜಾಪ್ರಭುತ್ವಗಳಾದ ಇಂಡಿಯ, ಅಮೆರಿಕ, ಬ್ರಿಟನ್, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಥೈವಾನ್ ಸೇರಿದಂತೆ ಹಲವು ದೇಶಗಳಲ್ಲಿ ಚುನಾವಣೆ ನಡೆಯಬೇಕಿದೆ. ಚುನಾವಣೆಗಳು ಆವರ್ತೀಯ ಪ್ರಕ್ರಿಯೆ ಎಂದು ಹೇಳಿಬಿಡಬಹುದು. ಆದರೆ, ಅಂದಾಜು 2 ಶತಕೋಟಿ ಜನರು ಪ್ರಜ್ಞಾಪೂರ್ವಕವಾಗಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದು, ಈ ಆಯ್ಕೆಗಳು ದೇಶದ-ನಾಗರಿಕರ ಸಮಸ್ಯೆಗಳನ್ನು ಬಗೆಹರಿಸಲು ನೆರವಾಗುತ್ತವೆಯೇ ಎನ್ನುವುದು ಪ್ರಶ್ನೆ. ಮತ ಚಲಾವಣೆಯಂಥ ಸಹಜ ಪ್ರಕ್ರಿಯೆಯ ಫಲಿತಾಂಶಗಳು ತಾರ್ಕಿಕವಾಗಿರುತ್ತವೆ ಎಂದು ಭಾವಿಸಬೇಕಿಲ್ಲ. ಅಮೆರಿಕದ ಪ್ರಜಾಸತ್ತೆ […]